ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೆ ಸಿ ವ್ಯಾಲಿ ಯೋಜನೆ ರದ್ದು,ಕನ್ನಡಿಗರ ಪ್ರಾದೇಶಿಕ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತನ್ನಿ, ಶ್ರೀನಿವಾಸಪುರ ಕ್ಷೇತ್ರದಲ್ಲಿ ಜಿಕೆ ವೆಂಕಟಶಿವಾರೆಡ್ಡಿ ರವರನ್ನು ವಿಧಾನಸಭೆಗೆ ಕಳುಹಿಸಿ ನಾನು ಮಂತ್ರಿ ಹಾಗೂ ಜಿಲ್ಲಾ ಸಚಿವರನ್ನು ಮಾಡುತ್ತೇನೆ : ಎಚ್ ಡಿ ಕುಮಾರಸ್ವಾಮಿ

ಸುಗಟೂರು ಕ್ಷೇತ್ರದಿಂದ ಪ್ರಾರಂಭ ಮಾಡಿದ ಪಂಚ ರತ್ನ ಯೋಜನೆಯರಥ ಮುಂದೆ ಸಾಗುತ್ತಾ ಯೋಜನೆಗಳ ಕುರಿತು ಹೆಚ್ ಡಿ ಕುಮಾರಸ್ವಾಮಿ ರವರು ಮಾತನಾಡಿ ಆರೋಗ್ಯ ಕ್ಷೇತ್ರ ಹಾಗೂ ಮಹಿಳೆಯರಿಗೆ ಯುವಕರಿಗೆ ಹಾಗೂ ರೈತರಿಗೆ ಸೇರುವಂತಹ ಎಲ್ಲ ರೀತಿಯಲ್ಲಿ ಅನುಕೂಲವಾಗುವಂತ ಯೋಚನೆಗಳು ನಮ್ಮ ಜೆಡಿಎಸ್ ಪಕ್ಷವು ಪಂಚರತ್ನ ಯೋಜನೆಯಲ್ಲಿ ಅಳವಡಿಸಿಕೊಂಡಿದೆ ಈ ಯೋಜನೆಗಳು ಸಮಗ್ರವಾಗಿ ಜನತೆಗೆ ತಲುಪಲು ಜೆಡಿಎಸ್ ಪಕ್ಷವನ್ನು ಸಂಪೂರ್ಣ ಅಧಿಕಾರ ಕೊಡಬೇಕು ಎಂದು ಎಚ್ ಡಿ ಕುಮಾರಸ್ವಾಮಿ ರವರು ಹೇಳಿದರು

 ಮಾಸ್ತಿನ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಯನ್ನು ಸಕ್ರಮವಾಗಿ ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಈ ಶಾಲೆಯನ್ನು ಮಕ್ಕಳು ಉಪಯೋಗ ಮಾಡುವಂತಹ ಕೆಲಸವನ್ನು ಮಾಡಬೇಕಾಗಿದೆ ಎಂದು ದಾರಿಯಲ್ಲಿ ಅಡ್ಡಲಾಗಿದ್ದ ಪ್ರತಿಭಟನೆಯ  ಶಾಲಾ ಮಕ್ಕಳಿಗೆ ತಿಳಿಹೇಳಿದರು

ಸ್ಥಳದಿಂದಲೇ ಶಿಕ್ಷಣ ಸಚಿವರಿಗೂ ಸಹ ಕರೆ ಮಾಡಿ ಅನಂತರ ಕೋಲಾರ ಜಿಲ್ಲೆಯ ಡಿಡಿಪಿಐ ಕೃಷ್ಣಮೂರ್ತಿ ರವರಿಗೂ ಸಹ ದೂರವಾಣಿಯಲ್ಲಿ ಶಾಲೆಯ ವ್ಯವಸ್ಥೆಯನ್ನು ಸುಗಮ ದಾರಿಯಲ್ಲಿ ಸಾಗುವಂತೆ ಮಾಡಬೇಕು ಎಂದು ತಿಳಿಸಿದರು

ಸ್ಥಳೀಯ ರಾಜಕಾರಣಿಗಳು ಅಧಿಕಾರದಲ್ಲಿ ಇದ್ದು ಏನು ಮಾಡುತ್ತಿದ್ದಾರೆ ಇಂತಹ ಜನ ಪರವಾದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಇಂತಹ ಶಾಸಕರು ಈ ಕ್ಷೇತ್ರಕ್ಕೆ ಬೇಕಾಗಿದ್ದಾರೆ ಇಂತಹ ಶಾಸಕರನ್ನು ಜನತೆಯು ವಿಸರ್ಜಿಸಿ ಶಾಸಕರ ಎಲ್ಲಾ ಅನುಭವವಿರುವ ಜಿಕೆ ವೆಂಕಟಶಿವಾರೆಡ್ಡಿ ರವರನ್ನು ಈ ಕ್ಷೇತ್ರಕ್ಕೆ ಈ ಬಾರಿ ಚುನಾವಣೆಯಲ್ಲಿ ಶಾಸಕರನ್ನಾಗಿ ಆಯ್ಕೆ ಮಾಡಿ ವಿಧಾನಸಭೆ ಕಳುಹಿಸಿ ಆಗ ನಾನು ಈ ಜಿಲ್ಲೆಯ ಸಚಿವರನ್ನಾಗಿ ಮತ್ತು ರಾಜ್ಯದ ಮಂತ್ರಿ ಪದವಿಯನ್ನು ಸಹ ಕೊಡುತ್ತೇನೆ ಆಗ ಶ್ರೀನಿವಾಸಪುರ ಕ್ಷೇತ್ರವು ಸಂಪೂರ್ಣವಾಗಿ ಅಭಿವೃದ್ಧಿಯನ್ನು   ಹೊಂದುತ್ತದೆ ಎಂದು ಹೇಳಿದರು

ಕೋಲಾರ ಜಿಲ್ಲೆಯನ್ನು ವಿಷಪೂರಿತ ಮಾಡುತ್ತಿರುವ ಕೆಸಿ ವ್ಯಾಲಿ ಯೋಜನೆಯು ಮೂರನೇ ಹಂತದ ಶುದ್ಧೀಕರಣ ಗೊಂಡರೆ ಮಾತ್ರ ನೀರು ಉಪಯೋಗ ಮಾಡಬಹುದು ಇಲ್ಲದೆ ಹೋದರೆ ವಿಷಪೂರಿತವಾಗಿ ಬಳಸುವ ನೀರಿನಿಂದ ಜನಸಾಮಾನ್ಯರು ಹಾಗೂ ಜಾನುವಾರುಗಳು ಮುಂದಿನ ದಿನಗಳಲ್ಲಿ ಅಪಾರವಾದ ನಷ್ಟವನ್ನು ಅನುಭವಿಸುವ ಪರಿಸ್ಥಿತಿ ಎದುರಾಗಬಹುದು

ಈಗ ಎರಡನೇ ಹಂತದ ಘಟಕದಲ್ಲಿ ಮೋಟಾರ್ ಪಂಪುಗಳು ಕೆಟ್ಟು ಹೋಗಿವೆ. ನೀರನ್ನು ಶುದ್ಧೀಕರಿಸದೆ ನೇರವಾಗಿ ಹರಿಸಲಾಗುತ್ತಿದೆ ಹೀಗಾಗಿ ಮೂರನೇ ಹಂತದಲ್ಲಿ ಸಂಸ್ಕರಿಸದೆ ಬೆಂಗಳೂರಿನಿಂದ ಒಂದು ಹನಿ ನೀರು ಹರಿಯಲು ಬಿಡುವುದಿಲ್ಲ ಸಂಪೂರ್ಣ ಯೋಜನೆಯನ್ನು ನಾನು ರದ್ದು ಮಾಡಬೇಕಾಗುವ ಪರಿಸ್ಥಿತಿ ಬರುತ್ತದೆ

ಕಾಂಗ್ರೆಸ್ನವರು ಕೋಟ್ಯಂತರ ರೂಪಾಯಿಗಳು ಖರ್ಚು ಮಾಡಿಸಿಕೊಂಡು ತಮ್ಮ ಜೋಬುಗಳನ್ನು ತುಂಬಿಸಿಕೊಳ್ಳುತ್ತಿದ್ದಾರೆ ಎಂಬುದು ಜಗತ್ ಜಾಹಿರು ಈಗ ಬಿಜೆಪಿ ಸರ್ಕಾರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು

ಕೋಲಾರ ಜಿಲ್ಲೆಯ ಅತ್ಯಂತ ಪ್ರವಾಸ ಮಾಡಿ ಅದ್ಭುತ ಪೂರ್ವ ಯಶಸ್ಸು ಕಂಡಿದೆ ಈ ಪ್ರಪಂಚ ರತ್ನ ಯೋಜನೆಯ ಕಾರ್ಯಕ್ರಮದಲ್ಲಿ ಜನರಿಂದ ಅತಿಹೆಚ್ಚಿನ ಸಹಕಾರ ಬೆಂಬಲ ವ್ಯಕ್ತವಾಗಿದೆ ಐದು ವಿಧಾನಸಭಾ ಕ್ಷೇತ್ರಗಳಲ್ಲೂ ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಿ ಬರುವುದು ಖಚಿತ ಎಂದು ಆಶಾಭಾವ ವ್ಯಕ್ತಪಡಿಸಿದರು

ನಾನು ಈ ರಾಜ್ಯದ ಮುಖ್ಯಮಂತ್ರಿ ಯಾರು ಅವಧಿಯಲ್ಲಿ ಕೋಲಾರ ಜಿಲ್ಲೆಗೆ ಎರಗೊಳ್ ಯೋಜನೆ ನಿರ್ಮಾಣ ಮಾಡಲು ಸುಮಾರು 50 ಕೋಟಿ ಹಣವನ್ನು ಮೀಸಲಿಟ್ಟು ಯೋಜನೆಯ ಅಭಿವೃದ್ಧಿಗೆ ಸರ್ಕಾರ ನೀಡಿದ್ದೇನೆ ಆದರೆ ಅನಂತರಾ ಬಂದ ಕಾಂಗ್ರೆಸ್ ಪಕ್ಷವು ಬೆಂಗಳೂರಿನಿಂದ ಕೊಳಚೆ ನೀರನ್ನು ತಂದು ಕೋಲಾರ ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸುವ ಪ್ರಯತ್ನ ಮಾಡಿ ಈ ಜಿಲ್ಲೆಯ ಜನರು ಆ ನೀರನ್ನು ಕುಡಿದರೆ ಮಾರಕ ರೋಗಗಳು ಬರುವುದರಲ್ಲಿ ಸಂಶಯವಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು

ಕೋಲಾರ ಜಿಲ್ಲೆಯಲ್ಲಿನ ಪರಿಸ್ಥಿತಿಯು ಇಂದು ಯಾವ ಮಟ್ಟಕ್ಕೆ ಇದೆ ಎಂದರೆ ಇಲ್ಲಿನ ರೈತರು ಬೆಳೆಯುವ ಟೊಮೇಟೊ ಬೆಂಗಳೂರಿನ ಮಾರುಕಟ್ಟೆ ಗೆ ಹೋಗಿ ಕೋಲಾರದ ಟೊಮೊಟೊ ಎಂದು ಹೇಳಿದರೆ ಮಾರಾಟಗಾರರು ಖರೀದಿ ಮಾಡಲು ಮುಂದೆ ಬರುತ್ತಿಲ್ಲ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದ ಅವಧಿಯಲ್ಲಿ 14 ತಿಂಗಳು ನಾನು ಮುಖ್ಯಮಂತ್ರಿ ಆಗಿದ್ದಾಗ 25,000 ಕೋಟಿ ರೈತರ ಸಾಲ ಮನ್ನಾ ಮಾಡಲು ಮುಂದಾಗಿದ್ದೆ ಆದರೆ ಕಾಂಗ್ರೆಸ್ ಸರ್ಕಾರವು ಎತ್ತಿನಹೊಳೆ ಎಂಬ ಹೆಸರಿಗೆ ಮುಂದಾಳತ್ವ ವಹಿಸಿ ಸುಮಾರು 13 ಸಾವಿರ ಕೋಟಿ ಅನುದಾನವನ್ನ ನುಂಗಿ ನೀರು ಪಾಲು ಮಾಡಿದ್ದಾರೆ . ಈಗ ಅದೇ ಚುನಾವಣೆಯ ಹೆಸರಿಟ್ಟುಕೊಂಡು ಮರಳಿ ನೀರನ್ನು ತರಲು 23,000 ಕೋಟಿ ಅನುದಾನ ಬೇಕೆಂದು ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು

2018ನೇ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಮುಂಚೆ ನಾನು ಸಮ್ಮಿಶ್ರ ಸರ್ಕಾರ ನಡೆಸಿದ ನಂತರ ನಾನು ಆಶ್ವಾಸನೆ ನೀಡಿದ್ದ ಮಾತಿನಂತೆ ಸಮ್ಮಿಶ್ರ ಸರ್ಕಾರದಲ್ಲಿ ಅನೇಕ ಒತ್ತಡಗಳು ಇದ್ದರೂ ಸಹ ನಾನು ಕೊಟ್ಟ ಮಾತನ್ನು ಚಾಚು ತಪ್ಪದೇ 14 ತಿಂಗಳ ಅಧಿಕಾರ ಅವಧಿಯಲ್ಲಿ 25,000 ರೈತರ ಸಾಲ ಮನ್ನಾ ಮಾಡಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ತಿಳಿಸಿದರು

ಪಂಚರತ್ನ ಯೋಜನೆಗಳ ಮುಖ್ಯ ಉದ್ದೇಶವೆಂದರೆ ರಾಜ್ಯದ ಎಲ್ಲಾ ಮಕ್ಕಳಿಗೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ಎಲ್ಲಾ ವರ್ಗದ ಜನರಿಗೂ ಈ ರಾಜ್ಯದಲ್ಲಿ ಆರೋಗ್ಯ ಸಂಪತ್ತು ಎಲ್ಲಾ ವರ್ಗದ ರೈತರಿಗೂ ರೈತ ಚೈತನ್ಯ ಎಲ್ಲಾ ಜನರಿಗೂ ವಸತಿಯ ಆಸರೆ ರಾಜ್ಯದ ಎಲ್ಲಾ ಮಹಿಳಾ ಮಣಿಗಳಿಗೆ ಯುವ ನವ ಮಹಿಳಾ ಸಬಲೀಕರಣ ಈ ಎಲ್ಲಾ ಯೋಜನೆಗಳು ಶಿಕ್ಷಣ ಕ್ರಾಂತಿ ಪ್ರತಿ ಹಳ್ಳಿಯ ಮನೆಮನೆಗೂ ತಲುಪಿಸ ಲೂ ಪಕ್ಷದ ಹಾಗೂ ಪಂಚರತ್ನ ಯೋಜನೆಗಳ ಅರಿವನ್ನು ಮೂಡಿಸಲು ಈ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು

ರಾಜ್ಯದಲ್ಲಿ ಶಿಕ್ಷಣವು ವ್ಯಾಪಾರಿಕರಣವಾಗಿರುವ ಇಂತಹ ಸಮಯದಲ್ಲಿ ಎಲ್ಕೆಜಿ ಇಂದ ಹಿಡಿದು ಪಿಯುಸಿ ವ್ಯಾಸಂಗದವರಿಗೆ ಎಲ್ಲಾ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸಲು ಸಂಕಲ್ಪವನ್ನು ಹೊಂದಿದ್ದೇನೆ ಅದೇ ರೀತಿಯಲ್ಲಿ  ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6,000 ಮಕ್ಕಳ ಸರ್ಕಾರಿ ಹೈಟೆಕ್ ಮಾದರಿ ಶಾಲೆಗಳನ್ನು ತೆರೆಯಲು ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಎರಡು ಮೂರು ವಾರ್ಡ್ ಗಳಿಗೆ ಒಂದು ಹೈಟೆಕ್ ಸರ್ಕಲ್ ಶಾಲೆಯನ್ನು ನಿರ್ಮಿಸಲು ಯೋಜನೆಯ ಉದ್ದೇಶವಾಗಿದೆ

ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಜನರಿಗೂ ಸಹ ಉತ್ತಮ ಆರೋಗ್ಯ ಸಿಗಲು 30 ಹಾಸಿಗೆ ಸಾಮರ್ಥ್ಯವುಳ್ಳ ಸರ್ಕಾರಿ ಹೈಟೆಕ್ ಆಸ್ಪತ್ರೆ ನಿರ್ಮಿಸಲಾಗುವುದು ಆಸ್ಪತ್ರೆಯಲ್ಲಿ ಐಸಿಯು ವಿಶೇಷ ವಾರ್ಡುಗಳು ಡಯಾಲಿಸಿಸ್ ಕೇಂದ್ರ ರಕ್ತಪರಿಕ್ಷ ಕೇಂದ್ರ ಉಚಿತ ಆಂಬುಲೆನ್ಸ್ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳು ಒಳಗೊಂಡಿರುವ ಬೀ ಪಿಎಲ್ ಫಲಾನುಭವಿಗಳಿಗೆ ಸರ್ಕಾರದಿಂದಲೇ 25 ರಿಂದ 30 ಲಕ್ಷ ರೂಪಾಯಿಗಳ ಆರೋಗ್ಯ ವಿಮೆಯನ್ನು ಸಹ ಮಾಡಿಸಲಾಗುವುದು ಕಾಯಿಲೆಗಳಿಂದ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಂಪೂರ್ಣವಾಗಿ ಅನುಕೂಲವಾಗುತ್ತದೆ ಎಂದು ತಿಳಿಸಿದರು

ರಾಜ್ಯದಲ್ಲಿ ಇರುವ ಎಲ್ಲಾ ಮಹಿಳೆಯರಿಗೆ ಕೌಶಲ್ಯ ತರಬೇತಿ ಮತ್ತು ತಂತ್ರಜ್ಞಾನ ಆಧಾರಿತ ಉದ್ಯೋಗ ಮತ್ತು ಉದ್ಯಮಶೀಲತೆ ಆಧಾರಿತ ತರಬೇತಿಗಳನ್ನು ನೀಡುವುದಾಗುವ ಈ ಕಾರ್ಯಕ್ರಮ ಪ್ರತಿ ಗ್ರಾಮಕ್ಕೂ ಈ ಕೌಶಲ್ಯ ತರಬೇತಿ ವಾಹನ ಮಹಿಳೆಯರ ಗೃಹ ಬಳಕೆ ವಸ್ತುಗಳ ತಯಾರಿಕಾ ತರಬೇತಿ ಕೇಂದ್ರ ಕೇಂದ್ರಗಳನ್ನು ರಾಜ್ಯದ ಎಲ್ಲಾ ಪಂಚಾಯಿತಿಗಳ ಕೇಂದ್ರ ಸ್ಥಾನದಲ್ಲಿ ಒಂದು ತರಬೇತಿ ಕೇಂದ್ರವನ್ನು ತೆರೆಯಲಾಗುವುದು ಎಂದು ತಿಳಿಸಿದರು ಈ ಎಲ್ಲಾ ಯೋಜನೆಗಳಿಗೆ ಕಾರ್ಯ ಆಗಲು ೧,೨೫,೦೦೦ ಕೊಟ್ಟೂರುಪಾಯಿಗಳ ಅನುದಾನಗಳು ಮೀಸಲೂ ಇಡಲಾಗುವುದು ಎಂದು ವಿವರಿಸಿದರು

ಜೆಡಿಎಸ್ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಮಾತನಾಡಿ ಈ ರಾಜ್ಯದ ಜನತೆಯ ಕುರಿತು ಪ್ರತಿನಿತ್ಯ ಆಲೋಚನೆ ಮಾಡುವ ನಾಯಕರ ಅಂದರೆ ಎಚ್ ಡಿ ಕುಮಾರಸ್ವಾಮಿ ರವರು ಅವರಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ ನಮ್ಮ ರಾಜ್ಯದ ಹೊರ ಹೊರ ರಾಜ್ಯಗಳಿಂದ ಬಂದು ಹೆಚ್ಚಿನ ಸಂಖ್ಯೆಯಲ್ಲಿ ಮೀಸಲಾತಿ ಅನುಕಂಪದ ಆಧಾರದ ಮೇಲೆ ಕಾರ್ಯವನ್ನು ಕೆಲಸಗಳನ್ನು ಮಾಡುತ್ತಿರುವ ಅವರಿಂದ ನಮ್ಮ ಕರ್ನಾಟಕದ ಜನರು ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ ನಮ್ಮ ಕರ್ನಾಟಕದ ಮುಖ್ಯಮಂತ್ರಿಯಾದರೆ ನಮ್ಮ ಕನ್ನಡಿಗರಿಗಾಗಿ ಪ್ರತ್ಯೇಕ ಮೀಸಲಾತಿಯನ್ನು ತರಬೇಕು ಇದರಿಂದ ನಾಡಿನ ಜನರಿಗೆ ಕನ್ನಡ ಭಾಷೆಯ ವಿದ್ಯಾಭ್ಯಾಸ ಪಡೆದಿರುವ ಎಲ್ಲರಿಗೂ ಪ್ರತ್ಯೇಕ ಮೀಸಲಾತಿಯನ್ನು ತರುವುದರಿಂದ ಉದ್ಯೋಗವನ್ನು ಕಲ್ಪಿಸಲಾಗಬೇಕು ಎಂದು ಒತ್ತಾಯ ಮಾಡಿದರು ರಾಜ್ಯದ ಪ್ರತಿ ಜಿಲ್ಲೆಗೊಂದು ಕೈಗಾರಿಕಾ ವಲಯವನ್ನು ಸ್ಥಾಪಿಸಿ ಉದ್ಯೋಗಗಳನ್ನು ಕಲ್ಪಿಸುವಲ್ಲಿ ಮುಂದಾಗ ಬೇಕಿದೆ ಎಂದು ಸಲಹೆಯನ್ನು ನೀಡಿದರು.

ಕೋಲಾರ ಜಿಲ್ಲೆಯ ಅಧ್ಯಕ್ಷರಾದ ಜಿಕೆ ವೆಂಕಟಶಿವಾರೆಡ್ಡಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮುಳಬಾಗಿಲು ಸಮೃದ್ಧಿ ಮಂಜುನಾಥ್ ಸಿಎಂಆರ್ ಶ್ರೀನಾಥ್ ಜೆಡಿಎಸ್ ಪಕ್ಷದ ಆಕಾಂಕ್ಷಿಗಳು ಮತ್ತು ಅಭ್ಯರ್ಥಿಗಳು ಸೇರಿದಂತೆ ಶ್ರೀನಿವಾಸಪುರ ತಾಲೂಕಿನ ಜಿಲ್ಲಾ ಪಂಚಾಯಿತಿ ಸದಸ್ಯರಾದ ತೂಪಲ್ಲಿ ನಾರಾಯಣಸ್ವಾಮಿ ಮಹಿಳಾ ಅಧ್ಯಕ್ಷರಾದ ಗಾಯತ್ರಿ ಮುತ್ತಪ್ಪ, ತಾಲೂಕು ಅಧ್ಯಕ್ಷ ವೇಣುಗೋಪಾಲ ರೆಡ್ಡಿ, ಸಿ ರವಿ, ಪೊ ಲೂ ಶಿವಾರೆಡ್ಡಿ ದಳಸನೂರು ಮಂಜುನಾಥ್, ರಾಮಚಂದ್ರಗೌಡ, ಶ್ರೀ ರಾಮೇಗೌಡ, ಕೆ ಪಿ ನಾಗೇಶ್, ಕುಂದುಟವಾರಿಪಲ್ಲಿ ಶಿವಾರೆಡ್ಡಿ ಜಿಕೆ ನಾಗರಾಜ್ ಶಶಿಕುಮಾರ್ ಶೇಷಾದ್ರಿ ಅಬ್ದುಲ್ಲ ರಾಜಣ್ಣ ಶ್ರೀನಿವಾಸ್ ಬಾಬು ಪಾಶ ಕುರ್ಕಿ ರಾಜೇಶ್ವರಿ ಹಾಗೂ ಜೆಡಿಎಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *