“ಸಂಸದರ ನಡೆ ಪಂಚಾಯಿತಿ ಕಡೆ” ವಿನೂತನ ಅಭಿಯಾನದ ಪೂರ್ವಭಾವಿ ಸಭೆ

ಕೋಲಾರ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಯಶಸ್ಸಿನಿಂದ ಪ್ರೇರಿತಗೊಂಡು ಮಾನ್ಯ ಲೋಕಸಭಾ ಸದಸ್ಯರಾದ ಎಸ್.ಮುನಿಸ್ವಾಮಿ ಅವರು ಸಂಸದರ ನಡೆ ಪಂಚಾಯಿತಿ ಕಡೆ ಎನ್ನುವ ವಿನೂನತ ಅಭಿಯಾನವನ್ನು ಕೈಗೊಳ್ಳಲು ಇಲಾಖಾ ವಾರು ಅಭಿವೃದ್ದಿ ಕಾಮಗಾರಿಗಳ ಅಂಕಿಅoಶಗಳನ್ನು ಸಭೆಯಿಂದ ಪಡೆದರು.
ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಕೋಲಾರ ಜಿಲ್ಲೆಯ ಕೇಂದ್ರ ರಾಜ್ಯ ಪುರಸ್ಕೃತ ಯೋಜನೆಗಳ ಪ್ರಗತಿ, ಇಲಾಖೆಯ ವಿವಿಧ ಯೋಜನೆಗಳು ಹಾಗೂ ಆಯ್ಕೆಯಾಗಿರುವ ಫಲಾನುಭವಿಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪ್ರತಿಯೊಂದು ಇಲಾಖೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳು ಹಾಗೂ ರಾಜ್ಯ ಪುರಸ್ಕೃತ ಯೋಜನೆಗಳ ಪೂರ್ಣಗೊಂಡ ಕಾಮಗಾರಿಗಳು ಹಾಗೂ ಫಲಾನುಭವಿಗಳ ಪಟ್ಟಿಯನ್ನು ಒಂದು ವಾರದ ಮಿತಿಯೊಳಗೆ ಮಾಹಿತಿ ಸಿದ್ದಪಡಿಸಿಕೊಳ್ಳುವಂತೆ ಸೂಚಿಸಿದ ಅವರು, ಜಿಲ್ಲೆಯ ೧೫೪ ಗ್ರಾಮ ಪಂಚಾಯತಿಗಳಲ್ಲಿ ಪ್ರತಿ ನಿತ್ಯ ೪ ಗ್ರಾಮ ಪಂಚಾಯಿತಿಗಳoತೆ ೬ ತಾಲ್ಲೂಕುಗಳಲ್ಲಿ ಸರದಿ ಮೇರೆಗೆ ಉದ್ದೇಶಿತ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. ಈ ಅಭಿಯಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಎಲ್ಲಾ ಇಲಾಖೆಗಳಿಂದ ಮಳಿಗೆಗಳನ್ನು ತೆರೆದು ಅದರಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಹಲವಾರು ಯೋಜನೆಗಳ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ಒದಗಿಸುವುದು ಹಾಗೂ ಆಯಾ ಯೋಜನೆಗಳ ಫಲಾನುಭವಿಗಳ ಅನುಭವವನ್ನು ಇನ್ನಿತರ ಫಲಾನುಭವಿಗಳಿಗೆ ತಿಳಿಸಿಕೊಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ ಅವರು ಈಗಾಗಲೇ ಸಾಧಿಸಿರುವ ಪ್ರಗತಿ ಕುರಿತು ಇಲಾಖಾ ವಾರು ಜಿಲ್ಲಾ ಮುಖ್ಯಸ್ಥರಿಂದ ವಿವರಗಳನ್ನು ಪಡೆದರು.
ಆರಂಭದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ನಗರಾಭಿವೃದ್ಧಿ, ಅರಣ್ಯ, ಆಹಾರ, ಕೌಶಲ್ಯಾಭಿವೃದ್ಧಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳಿಂದ ಅಂಕಿಅoಶಗಳ ಮಾಹಿತಿ ಪಡೆದ ಸಂಸದರು ವಿವಿಧ ಯೋಜನೆಗಳ ಪಂಚಾಯಿತಿವಾರು ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಿ ಕೊಡುವಂತೆ ಸೂಚಿಸಿದರು.
ಕೇಂದ್ರ ಹಾಗೂ ರಾಜ್ಯ ಪುರಸ್ಕೃತ ಯೋಜನೆಗಳ ಫಲಾನುಭವಿಗಳಿಗೆ ಸಿಕ್ಕಿರುವ ಸೌಲಭ್ಯಗಳಲ್ಲಿ ಯಾವ ಯೋಜನೆಯಡಿಯಲ್ಲಿ ಆ ಫಲಾನುಭವಿಗಳಿಗೆ ಆ ಸೌಲಭ್ಯ ದೊರಕಿದೆಯೋ ಅಂತಹ ಸೌಲಭ್ಯದ ಮೇಲೆ ಆ ಯೋಜನೆಯ ವಿವರಣೆಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಹಾಗಾದಾಗ ಮಾತ್ರ ಯೋಜನೆಗಳು ಸಾಮಾನ್ಯ ಜನತೆಗೆ ತಲುಪಿ ಅವರೂ ಸಹ ಯೋಜನೆಗಳ ಸೌಲಭ್ಯವನ್ನು ಪಡೆಯಲು ಪ್ರೇರೇಪಿತವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಪ್ರೊಬೆಷನರಿ ಐಎಎಸ್ ಅಧಿಕಾರಿ ವಿನಾಯಕ್, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *