ಶ್ರೀನಿವಾಸಪುರ ಇತಿಹಾಸದಲ್ಲಿಯೇ ಸ್ವಾಮಿ (ಕೆ,ಆರ್,ರಮೇಶ್ ಕುಮಾರ್)ಗೆ ಎದುರಾಳಿಯಾಗಿ ಕಾಂಗ್ರೇಸ್ ಪಕ್ಷದಿಂದ ಟಿಕೇಟ್ ಪೈಪೋಟಿಗೆ ನಿಂತ ದಳಸನೂರು ಗೋಪಾಲಕೃಷ್ಣ, ಒಂದು ಸಾವಿರ ಸಂಖ್ಯೆಯ ಕಾರ್ಯಕರ್ತರ ಸಭೆಯಲ್ಲಿ ಎಂ,ಎಲ್,ಎ ಟಿಕೆಟ್ ಕಾಂಗ್ರೇಸ್ ನಿಂದ ಪಡೆಯಲು ದಳಸನೂರು ಗೋಪಾಲಕೃಷ್ಣ ಅಭಿಪ್ರಾಯ ಕೇಳಿದಾಗ ನಿರೀಕ್ಷೆಗೆ ಮೀರಿದ ಜನ ಸಂದಣಿಯಿoದ ಸಂತಸ:

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ೪೦ ವರ್ಷಗಳಿಂದ ಕಾಂಗ್ರೇಸ್ ಪಕ್ಷಕ್ಕೆ ದುಡಿದಿದ್ದೇನೆ ೨೦೨೩ ರಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ನೀಡಲು ಮುಂದಾಗಿದ್ದೇನೆ ನಿಮ್ಮ ಅಭಿಪ್ರಾಯ ತಿಳಿಸಿ ನನಗೆ ಆಶೀರ್ವಾದ ಮಾಡಬೇಕು ಎಂದು ಮಾವು ಮಂಡಳಿ ಅಭಿವೃದ್ದಿ ಮಾಜಿ ಅದ್ಯಕ್ಷ ದಳಸನೂರು ಎಲ್. ಗೋಪಾಲಕೃಷ್ಣ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಪಟ್ಟಣದ ವೆಂಕಟೇಗೌಡ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹಾಗು ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಗೋಪಾಲಕೃಷ್ಣ ನಾನು ೨೫ ನೇ ವಯಸ್ಸಿಗೆ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾಗಿದ್ದೆ ಅಂದಿನಿAದಲೂ ನಾನು ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ೪೦ ವರ್ಷಗಳಿಂದ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಸೇವೆಯನ್ನು ಸಲ್ಲಿಸಿದ್ದೇನೆ.
ನನ್ನ ರಾಜಕೀಯ ಜೀವನದಲ್ಲಿ ಹಾಲಿ ಶಾಸಕರಿಗೆ ಎಂದೂ ಪಕ್ಷದ್ರೊಹ ಕೆಲಸವನ್ನು ಮಾಡಿಲ್ಲ. ಹಾಲಿ ಶಾಸಕ ಕೆ.ಆರ್.ರಮೇಶ್‌ಕುಮಾರ್‌ರವರು ಕಳೆದ ವಿಧಾನ ಸಭೆ ಚುನಾವಣೆಗೆ ನಿಲ್ಲುವಾಗ ಇದು ನನ್ನ ಕೊನೆಯ ಚುನಾವಣೆ ಎಂದು ಘೋಷಣೆ ಮಾಡಿದ್ದು ನಿಮಗೆಲ್ಲಾ ಗೊತ್ತಿದೆ ಈಗ ಅದರ ಪ್ರಕಾರವೇ ನಡೆದುಕೊಳ್ಳಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪ್ರಚಾರಕ್ಕಾಗಿ ನಾನು ಗೌನಿಪಲ್ಲಿ ಗೆ ಹೋದಾಗ ಅಲ್ಲಿನಡೆದಂತಹ ಘಟನೆ ನನ್ನ ಜೀವನದಲ್ಲಿ ಮರೆಯಲಾಗದ ಘಟನೆ, ಅಲ್ಲಿ ನಡೆದ ಕೃತ್ಯದಬಗ್ಗೆ ಪತ್ರಿಕೆಗಳಲ್ಲಿ ದೃಶ್ಯ ಮಾದ್ಯಮಗಳಲ್ಲಿ ಬಿತ್ತರವಾದ ವೀಡಿಯೋ ತುಣುಕುಗಳನ್ನ ಎಲ್ಲರೂ ನೋಡಿದ್ದೀರಿ ಎಂದರು.
ಈ ಘಟನೆಯಿಂದ ನನಗೆ ತುಂಬಾ ನೋವಾಗಿದ್ದು ಯಾರೂ ಸಹಾ ಇದರ ಬಗ್ಗೆ ಪ್ರಸ್ತಾಪ ಮಾಡಲಿಲ್ಲಾ ಕನಿಷ್ಠ ಪಕ್ಷ ಸಮಾದಾನ ಪಡಿಸುವಲ್ಲಿ ಸೌಜನ್ಯತೆ ಸಹಾ ತೋರಲಿಲ್ಲಾ, ಪಕ್ಷದ ವಿರೋದಿ ಚಟುವಟಿಕೆಗಳು ನಡೆಸುವ ನಾಯಕರನ್ನು ನೀವು ಬೆಳೆಸುತ್ತಿದ್ದೀರಿ ಪಕ್ಷಕ್ಕೆ ನಿಯತ್ತಾಗಿ ದುಡಿದಂತಹ ಕಾರ್ಯರ್ತರನ್ನು ಮೂಲೆ ಗುಂಪು ಮಾಡಿದ್ದೀರಿ ಇದೆಲ್ಲಾ ಜನ ಮರೆತಿಲ್ಲಾ .
ಕರ್ನಾಟಕ ಪ್ರದೇಶ ಕಾಂಗ್ರೇಸ್ ಪಕ್ಷದ ಆದೇಶದಂತೆ ಇದೇ ತಿಂಗಳ ೧೫ ರ ಒಳಗೆ ಎಲ್ಲಾ ವಿದಾನ ಸಭಾ ಕ್ಷೇತ್ರಗಳ ಮುಂಬರುವ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ನೀಡುವುದಕ್ಕೆ ಪಕ್ಷದ ಅದ್ಯಕ್ಷ ಡಿ.ಕೆ ಶಿವಕುಮಾರ್ ರವರು ತಿಳಿಸಿದ್ದಾರೆ. ಹಾಗೆಯೇ ನಮ್ಮ ಸ್ವಗ್ರಾಮ ದಳಸನೂರು ಗ್ರಾಮದಿಂದ ಕಾರ್ಯಕರ್ತರ ಅಭಿಪ್ರಾಯ ಸ್ವೀಕರಿಸಿ ಸಭೆಯನ್ನು ಪ್ರಾರಂಬಿಸಿದೆ.
ಅನೇಕ ಗ್ರಾಮಗಳಿಗೆ ಬೇಟಿ ನೀಡಿದ್ದೇನೆ, ಹಾಗೆಯೇ ತಾಲೂಕಿನ ಕಾಂಗ್ರೇಸ್ ನ ಹಿರಿಯ ಮುಖಂಡರಾದ ದಿಂಬಾಲ ನಾರಾಯಣಸ್ವಾಮಿ, ಆಲವಾಟ ಶ್ರೀರಾಮರೆಡ್ಡಿ, ಗಾಜಲಪಲ್ಲಿ ಸೀನಪ್ಪ, ಇಂತಹ ಅನೇಕ ಮುಖಂಡರ ಬಳಿ ನಾನು ಹೋಗಿ ಅವರ ಬಳಿ ಚರ್ಚಿಸಿದಾಗ ನೀನು ಒಳ್ಳೆಯ ನಿರ್ಣಯ ಕೈಗೊಂಡಿರುವೆ ನಿನಗೆ ಸ್ವಾಗತ ಎಂದು ಶುಭ ಕೋರಿದ್ದಾರೆ, ನಿನ್ನ ಹೆಗಲಿಗೆ ನಾವು ಹೆಗಲು ಕೊಡಲು ನಾವಿದ್ದೇವೆ ಎಂದು ದೈರ್ಯವನ್ನು ತುಂಬಿದ್ದಾರೆ, ಅವರಿಗೆ ಸದಾ ಚಿರು ಋಣಿಯಾಗಿರುತ್ತೇನೆ ಎಂದರು,
ಈಬಾರಿ ಈ ಕ್ಷೇತ್ರದಿಂದ ಸ್ಪರ್ದಿಸಲು ಅಂತಿಮ ತೀರ್ಮಾನ ಕೈಗೊಂಡಿದ್ದೇವೆ ಎಲ್ಲಾ ಕಾರ್ಯಕರ್ತರೂ ನನ್ನೊಂದಿಗೆ ಇರಬೇಕೆಂದು ಕೇಳಿದಾಗ ಸಬೆಯಲ್ಲಿದ್ದ ಕಾರ್ಯಕರ್ತರು ಚಪ್ಪಾಳೆ ಸುರಿಮಳೆಯನ್ನು ಸುರಿಸುತ್ತಾ ಸದಾ ನಿಮ್ಮೊಂದಿಗೆ ನಾವಿರುತ್ತೇವೆ ಎಂದು ದೈರ್ಯವನ್ನು ತುಂಬಿದರು.

ಕೆ ಹೆಚ್ ಮುನಿಯಪ್ಪರವರ ಹಾಗೂ ನನ್ನ ಸಹಾಯಕ್ಕೆ ಬಂದು ಅಂಗಲಾಚಿದ ರಮೇಶ್ ಕುಮಾರ್ ರವರು ನಮ್ಮನ್ನೇ ಮೂಲೆಗುಂಪು ಮಾಡಿದರು.

ಜನತಾ ಪಕ್ಷದಲ್ಲಿ ಇದ್ದಾಗ ಶಾಸಕರ ರಮೇಶ್ ಕುಮಾರ್ ಅವರು ಅಂದಿನ ದಿನಗಳಲ್ಲಿ ಮರಳಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾದಾಗ ನನ್ನ ಬಳಿ ಬಂದು ನಾನು ರಾಜಕೀಯದಲ್ಲಿ ಸ್ಥಿರವಾಗಿ ನಿಭಾಯಿಸಲು ನಿನ್ನ ಅವಶ್ಯಕತೆ ಇದೆ ಎಂದು ನನ್ನ ಬಳಿ ಬಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು ಆಗ ನಾನು ಯಾವುದೇ ರೀತಿಯಲ್ಲಿಯೂ ಹಿಂದೆ ತುಳಿಯದೆ ರಮೇಶ್ ಕುಮಾರ್ ರವರಿಗಾಗಿ ಹಗಲಿರುಳು ದುಡಿದು ನಾನು ಎಂಎಲ್ಎ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಸಹ ಕೈಬಿಟ್ಟಿದ್ದೆ
ಅನಂತರಗಳಲ್ಲಿ ಶಾಸಕ ಕೆಆರ್ ರಮೇಶ್ ಕುಮಾರ್ ರವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ನೀಡಲು ಪಕ್ಷದಿಂದ ಯಾವುದೇ ರೀತಿಯ ಸಹಕಾರ ಇರಲಿಲ್ಲ ಆಗ ನಾನು ಹಾಗೂ ಮಾಜಿ ಕೇಂದ್ರ ಸಚಿವರಾದ ಕೆಎಚ್ ಮುನಿಯಪ್ಪ ರವರು ಮತ್ತು ಡಿಕೆ ಶಿವಕುಮಾರ್ ಅವರು ಮತ್ತು ಜನರ‍್ಧನ ಪೂಜಾರಿ ರವರು ದೆಹಲಿ ಕಚೇರಿಯ ಬಳಿ ಅಲೆದಾಡಿ ಅವರ ಮನಸ್ಸನ್ನು ಒಲಿಸುವಲ್ಲಿ ಯಶಸ್ವಿ ಆದೆವು ಆಗ ಕಾಂಗ್ರೆಸ್ ಪಕ್ಷದಲ್ಲಿ ಇದ್ದ ಜಿಕೆ ವೆಂಕಟಶಿವಾರೆಡ್ಡಿ ಅವರು ಟಿಕೆಟ್ ತಪ್ಪಿ ಬಿಜೆಪಿ ಪಕ್ಷದಿಂದ ಸ್ರ‍್ಧೆ ಮಾಡಿದರು ಆ ವೇಳೆಯಲ್ಲಿ ಬಿ ಫಾರಂ ಪಡೆದುಕೊಂಡ ರಮೇಶ್ ಕುಮಾರ್ ಅವರೊಂದಿಗೆ ಯಾರು ಇರಲಿಲ್ಲ ನಾನು ಅವರೊಂದಿಗೆ ಬೆಂಗಳೂರಿನಿಂದ ಬಿ ಫಾರಂ ತೆಗೆದುಕೊಂಡು ದಾರಿಯಲ್ಲಿ ಬರುತ್ತಿದ್ದಾಗ ಅಂದಿನ ಎಸ್ಪಿ ರವರು ದೂರವಾಣಿ ಮೂಲಕ ಕರೆಯನ್ನು ಮಾಡಿ ನೀವು ಯಾವ ದಾರಿಯಲ್ಲಿ ಬರುತ್ತಿದ್ದೀರಿ ಎಂದು ನಮ್ಮನ್ನು ಕೇಳಿದಾಗ ನಾವು ಚಿಂತಾಮಣಿ ಕಡೆಯಿಂದ ಬರುತ್ತಿದ್ದೇವೆ ಎಂದು ಹೇಳಿದರು ಆ ವೇಳೆಯಲ್ಲಿ ಚಿಂತಾಮಣಿ ಇಂದ ಬರುವ ಹಾದಿಯಲ್ಲಿ ನಮ್ಮ ಮೇಲೆ ಹಲ್ಲೆ ಮಾಡಲು ರೂಪರೇಷೆಗಳು ಸಿದ್ಧಗೊಂಡಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿದಾಗ ನಾವು ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ಮಾಡಿಕೆರೆ ಕ್ರಾಸ್ ಬಳಿ ವಾಹನವನ್ನು ನಿಲ್ಲಿಸಿ ಆನಂತರ ವರಿಷ್ಠಾಧಿಕಾರಿಗಳು ರಿರ‍್ವ್ ಪೊಲೀಸ್ ಜೀಪ್ ನೊಂದಿಗೆ ನಮಗೆ ರಕ್ಷಣೆಯನ್ನು ನೀಡುತ್ತಾ ಶ್ರೀನಿವಾಸಪುರ ಪಟ್ಟಣಕ್ಕೆ ಕರೆದು ಕೊಂಡುಬಂದು ಕಾಂಗ್ರೆಸ್ ಪಕ್ಷದಿಂದ ಶಾಸಕ ಕೆಆರ್ ರಮೇಶ್ ಕುಮಾರ್ ಅವರಿಗೆ ಸಾತ್ ನೀಡಿದೆವು
ಇಂತಹ ಸಮಯಗಳಲ್ಲಿ ಕೆಎಚ್ ಮುನಿಯಪ್ಪ ರವರು ಹಾಗೂ ನಾನು ಇಬ್ಬರೂ ಸಹ ಇಂದಿನ ಹಾಲಿ ಶಾಸಕರಿಗೆ ರಕ್ಷಣೆಯಾಗಿ ನಿಂತು ಅವರ ಬೆನ್ನೆಲುಬಾಗಿ ದುಡಿತಿದ್ದೆವು. ಆದರೆ ಅವರು ಎನು ಕೆಲಸವನ್ನು ಮಾಡಿದ್ದಾರೆ ಎಂಬುದು ನಿಮಗೆ ಗೊತ್ತಿದೆ ಯಲ್ಲವೇ.
ನಾನು ಈ ಬಾರಿ ಈ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಈಗ ಯಾರ ಮಾತನ್ನು ಆಲಿಸುವುದಿಲ್ಲ ನಾನು ಪಕ್ಷದ ಸಿದ್ಧಾಂತಗಳಿಗೆ ಬದ್ಧನಾಗಿದ್ದೇನೆ ನಮ್ಮ ಕುಟುಂಬವು ಸಹ ಸ್ವತಂತ್ರ ಹೋರಾಟಗಳಲ್ಲಿ ಭಾಗಿಯಾಗಿರುವ ಕುಟುಂಬವಾಗಿದೆ ನಾನು ಪಕ್ಷಕ್ಕಾಗಿ ಶ್ರಮಿಸಿದ್ದೇನೆ ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿರುವುದಂತೂ ಸತ್ಯ ನಮ್ಮೊಂದಿಗೆ ನೀವು ಎಲ್ಲರೂ ಇರಬೇಕು ಅಂತಿಮವಾಗಿ ಪಕ್ಷದ ವರಿಷ್ಠರು ಯಾವ ನರ‍್ಧಾರ ಕೈಗೊಳ್ಳುತ್ತಾರೆ ಅದಕ್ಕೆ ನಾನು ಸದಾ ಬದ್ಧನಾಗಿರುತ್ತೇನೆ, ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತ ಕರ‍್ಯ ರ‍್ತನಾಗಿರುತ್ತೇನೆ ಎಂದು ಹೇಳಿದರು

    ಎನ್,ಜಿ,ಬ್ಯಾಟಪ್ಪನವರೇ  ನಾನು ಮಾನವೀಯತೆ ಇರುವವರೊಂದಿಗೆ ಸೌಜನ್ಯದಿಂದ ಮಾತುಕತೆ ನೆಡೆಸಬಹುದು ನನಗೆ ಆಗಿರವ ಗಾಯ ವಾಸಿಯಾಗಿಲ್ಲಾ ಎಂದು ಗೋಪಾಲಕೃಷ್ಣ ಸಿಡಿಮಿಡಿ.   

ಕೋಚಿಮುಲ್ ಮಾಜಿ ಅಧ್ಯಕ್ಷ ಬ್ಯಾಟಪ್ಪ ಮಾತನಾಡಿ ದಳಸೂನರು ಗೋಪಾಲಕೃಷ್ಣ ರವರು ವಿದ್ಯಾರ್ಥಿ ದಸೆಯಿಂದಲೇ ಪಕ್ಷಕ್ಕೆ ದುಡಿದಿದ್ದಾರೆ. ಕಳೆದ ಐದು ಚುನಾವಣೆಗಳಲ್ಲಿ ಶಾಸಕ ಕೆ.ಆರ್.ರಮೇಶ್‌ಕುಮಾರ್ ಪರವಾಗಿ ಕೆಲಸಮಾಡಿದ್ದಾರೆ. ಹಾಲಿ ಶಾಸಕರನ್ನು ಸತತ ಎರಡು ಬಾರಿ ಗೆಲ್ಲಿಸುವ ಕೀರ್ತಿ ಕ್ಷೇತ್ರದ ಜನತೆ ಹಾಗೂ ಕಾರ್ಯಕರ್ತರಿಗೆ, ಗೋಪಾಕೃಷ್ಣರವರಿಗೆ ಸಲ್ಲುತ್ತದೆ. ನಾವೆಲ್ಲರೂ ಸೇರಿ ಹೊಂದಾಣಿಕೆ ಮಾಡಿಕೊಂಡು ಪಕ್ಷವನ್ನು ಮುನ್ನೆಡಿಸಿಕೊಂಡು ಹೋಗಬೇಕು. ಬಹಳ ಕಷ್ಟಪಟ್ಟು ಪಕ್ಷವನ್ನು ಕಟ್ಟಿದ್ದೇವೆ ಒಗ್ಗಟಿನೊಂದಿಗೆ ಪಕ್ಷವನ್ನು ಬಲಗೊಳಿಸಬೇಕು ಎಂದು ಸಲಹೆ ನೀಡಿ ಗೌನಿಪಲ್ಲಿ ಘಟನೆ ಬಗ್ಗೆ ನನ್ನ ಬಳಿ ಹಾಲಿ ಶಾಸಕರಾಗಲೀ ಗೋಪಾಲಕೃಷ್ಣ ಆಗಲೀ ಚರ್ಚಿಸಿಲ್ಲಾ ಹಾಗೇನಾದರೂ ಚರ್ಚಿಸಿದ್ದರೆ ನಾನು ಸಮಸ್ಯೆ ಬಗೆಹಸಲು ಪ್ರಯತ್ನ ಮಾಡುತ್ತಿದ್ದೆ ಎಂದರು.

ಇದೇ ನನ್ನ ಕಡೆ ಚುನಾವಣೆಇನ್ನು ಚುನಾವಣೆಗೆ ನಿಲ್ಲಲ್ಲಾ ಎಂಬ ಮಾತಿನ ಮೇಲೆ ನಿಲ್ಲಿ ಜನರ ಋಣ ತೀರಿಸಿ ಸ್ವಾಮಿ:

ಶೇಷಾಪುರ ಗೋಪಾಲ ಗೌಡ

ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾದ್ಯಕ್ಷ ಶೇಷಾಪುರ ಗೋಪಾಲ್‌ಗೌಡ ಮಾತನಾಡಿ ದಳಸನೂರು ಗೋಪಾಕೃಷ್ಣರವರು ೧೯೯೪ ರಲ್ಲೇ ಎಂಎಲ್‌ಎ ಟಿಕೆಟ್ ಆಕಾಂಕ್ಷೆಯಾಗಿದ್ದು ತದನಂತರ ಪಕ್ಷದಲ್ಲಿ ೨೦೦೪ ರಲ್ಲಿ ಕೂಡ ಪ್ರಯತ್ನ ಮಾಡಿದ್ದರು ಆದರೆ ಈ ತಾಲ್ಲೂಕಿನ ಒಬ್ಬ ಪುಣ್ಯಾತ್ಮನಿಂದ ಟಿಕೆಟ್ ಕೈತಪ್ಪಿತು ಆದರೆ ಈ ಬಾರಿ ಟಿಕೆಟ್ ಕೊಡಿಸುವವರೆಗೂ ನಾವು ನಿದ್ರಿಸುವುದಿಲ್ಲ ಎಂದು ಶಪಥ ಮಾಡಿದರು.
ಸ್ವಾಮಿ ಶಾಸಕರೇ ನಾವು ನಿಮ್ಮ ಋಣದಲ್ಲಿ ಇಲ್ಲ, ನಮ್ಮ ಋಣದಲ್ಲಿ ನೀವು ಇದ್ದೀರಿ ಎಂದು ಪರೋಕ್ಷವಾಗಿ ಹಾಲಿ ಶಾಸಕ ಕೆ,ಆರ್,ರಮೇಶ್ ಕುಮಾರ್ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು, ಇದು ನನ್ನ ಕೊನೇ ಚುನಾವಣೆ ಎಂದು ನೀವೇ ಹೇಳಿರುವ ಮಾತಿನ ಮೇಲೆಯೇ ನಿಲ್ಲಬೇಕು ಜನರನ್ನು ದಿಕ್ಕು ತಪ್ಪಿಸಿದ್ದೀರಿ ಆಗ ಆಡಿದ ಮಾತಿಗೆ ತಪ್ಪುತ್ತೀರಾ ಇದೇನಾ ನಿಮ್ಮ ನಿಯತ್ತು ಈ ಬಾರಿಯಾದರೂ. ಆಡಿದ ಮಾತು ತಪ್ಪದೇ ಗೋಪಾಲಕೃಷ್ಣರವರಿಗೆ ಅವಕಾಶ ಮಾಡಿಕೊಡಿ ಎಂದು ಹಾಲಿ ಶಾಸಕ ರಮೇಶ್ ಕುಮರ‍್ರವರಿಗೆ ಸಭೆಯ ಮೂಲಕ ಕರೆ ಕೊಟ್ಟರು.

ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗಾಂಡ್ಲಹಳ್ಳಿ ಶಶಿಕುಮಾರ್, ದಳಸನೂರು ಗ್ರಾಮಪಂಚಾಯಿತಿ ಅದ್ಯಕ್ಷಿಣಿ ಎಂ,ಸರಸ್ಪತಮ್ಮ, ಉಪಾದ್ಯಕ್ಷ ಜಗದೀಶ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಗಾಂಡ್ಲಹಳ್ಳಿ ವೆಂಕಟಾಚಲಪತಿ, ಬಾರ್‌ಕೃಷ್ಣೇಗೌಡ, ರೈತ ಮುಖಂಡ ಬೈಚೇಗೌಡ, ಚಲ್ದಿಗಾನಹಳ್ಳಿ ಸಿ.ವಿ ಪ್ರಬಾಕರ್ ಗೌಡ, ಬಿಸೇಗೌಡ, ಸಂಪತ್ ಕುಮಾರ್, ಸತೀಶ್, ಸಿ.ಕೆ ಮಂಜುನಾಥ್, ಪಾಳ್ಯ ಗೋಪಾಲರೆಡ್ಡಿ, ಜೋಗರೆಡ್ಡಿಪಲ್ಲಿ ಪ್ರಸಾದ್, ಡಿ,ಬಿ,ವೀರಬದ್ರೇಗೌಡ, ದಳಸನೂರು ವೀರಭದ್ರಸ್ವಾಮಿ,ನಂಬಿಹಳ್ಳಿ ಶ್ರೀರಾಮರೆಡ್ಡಿ, ಗುಮ್ಮರೆಡ್ಡಿಪುರ ಆದಿನಾರಾಯಣಶೆಟ್ಟಿ ಹೂಹಳ್ಳಿ ಬಾಬು, ಆದಿಜಾಂಬುವ ಸಂಘದ ತಾಲ್ಲೂಕು ಅದ್ಯಕ್ಷ ದೊಡಮಲದೊಡ್ಡಿ ಶ್ರೀನಿವಾಸ್, ನಂಬಿಹಳ್ಳಿ ನಾರಾಯಣಸ್ವಾಮಿ, ನಾಗದೇನಹಳ್ಳಿ ವೆಂಕಟರವಣ, ನಾರಾಯಣಸ್ವಾಮಿ, ಚಲ್ದಿಗಾನಹಳ್ಳಿ ವೆಂಕಟೇಶ್, ವೆಂಕಟೇಶ್ ಗೌಡ, ಶ್ರೀನಿವಾಸಗೌಡ,ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಕುಮಾರ್, ಹೆಬ್ಬಟ ನಾರಾಣ ಗೌಡ,ಶೆಟ್ಟಿಹಳ್ಳಿ ಗುತ್ತಿಗೆದಾರ ವೆಂಕಟೇಶ್,ಚಿರುವನಹಳ್ಳಿ ಚಂದ್ರೇಗೌಡ, ವಳಗೇರನಹಳ್ಳಿ ನಟರಾಜ್,ಬಿಶ್ರೀನಿವಾಸ್, ಹರೀ಼ಶ್,ಇನ್ನೂ ಹಲವಾರು ಕಾಂಗ್ರೇಸ್ ಕಾರ್ಯಕರ್ತರು ಇದ್ದರು.ಈ ವೇಳೆಯಲ್ಲಿ ಬಂದಿದ್ದ ಕಾರ್ಯಕರ್ತರಿಗೆ ಕುದೀನಾಬಾತ್,ಮಸಾಲೆ ವಡೆ ಕಾಷು ಬರ್ಪಿ ವ್ಯವಸ್ಥೆ ಮಾಡಲಾಗಿತ್ತು.

Leave a Reply

Your email address will not be published. Required fields are marked *